ಉಬರ್ ಟೆಕ್ನಾಲಜೀಸ್ ಅಮೆರಿಕಾದ ಅಂತರಾಷ್ಟ್ರೀಯ ಸಂಸ್ಥೆಯಾಗಿದೆ. ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಉಬರ್, ತನ್ನ ಮೊಬೈಲ್ ಅಪ್ಲಿಕೇಶನ್ ಮೂಲಕ ಜನರ ಪ್ರಯಾಣಕ್ಕೆ ಬಾಡಿಗೆ ಕಾರುಗಳನ್ನು ಕಾದಿರಿಸಿ ಪ್ರಯಾಣಿಸಲು ಅನುವುಮಾಡಿಕೊಡುತ್ತದೆ. ಜಗತ್ತಿನಾದ್ಯ೦ತ ಸುಮಾರು ೬೩೩ ನಗರಗಳಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತದೆ. ಉಬರ್ ಅಪ್ಲಿಕೇಶನ್ ತಂತ್ರಾಂಶ ಬಳಸಲು ಕಾರ್ ಚಾಲಕರು ಸ್ಮಾರ್ಟ್ಫೋನ್ ಹೊಂದಿರಬೇಕು ಮತ್ತು ಬಳಕೆದಾರರು ಸ್ಮಾರ್ಟ್ಫೋನ್ ಅಥವಾ ಮೊಬೈಲ್ ವೆಬ್ಸೈಟ್ಗೆ ಪ್ರವೇಶವನ್ನು ಹೊಂದಿರಬೇಕು. ಉಬರ್ ಅನ್ನು ೨೦೦೯ ರಲ್ಲಿ ಟ್ರಾವಿಸ್ ಕಲಾನಿಕ್ ಮತ್ತು ಗ್ಯಾರೆಟ್ ಕ್ಯಾಂಪ್ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ "ಉಬರ್ ಕ್ಯಾಬ್" ಎಂದು ಸ್ಥಾಪಿಸಿದರು. 2011 ರಲ್ಲಿ, ಕಂಪನಿಯು ಉಬರ್ ಕ್ಯಾಬ್ ನಿಂದ ಉಬರ್ ಗೆ ತನ್ನ ಹೆಸರನ್ನು ಬದಲಾಯಿಸಿತು. === ಉಬರ್ ಈಟ್ಸ್ === ಉಬರ್ ಈಟ್ಸ್ ಅನ್ನು ೨೦೧೪ ರ ಆಗಸ್ಟ್ನಲ್ಲಿ ಪ್ರಾರಂಭಿಸಲಾಯಿತು . ಇದು ಆನ್ಲೈನ್ ಆಹಾರ ಆರ್ಡರ್ ಮಾಡುವ ಸೇವೆಗಾಗಿದೆ. == ಉಲ್ಲೇಖಗಳು ==